Sunday, 15 May 2022

Press note of FDA Exams

  shekharagouda       Sunday, 15 May 2022


ಸಾಲಿನ ಸಹಾಯಕರು/ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ:18--03-2022ರಂದು ಪ್ರಕಟಿಸಲಾದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅಫಜಲಪುರದ 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಗೊಂಡಿರುವುದಾಗಿ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳಿಗೆ ಸಂಬಂಧಿಸಿದಂತೆ, ಆಯೋಗವು ಕೆಳಕಂಡ ಪ್ರಕಟಣೆಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.

2019ನೇ ಸಾಲಿನ ಸಹಾಯಕರು/ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ ಸಂಬಂಧ, ಆಯೋಗವು ದಿನಾಂಕ:24-01-2021 (ಭಾನುವಾರ)ದಂದು ನಡೆಸಲು ಉದ್ದೇಶಿಸಿದ್ದ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ನಡೆಸಲು ಸಾಧ್ಯವಾಗಿರುವುದಿಲ್ಲವಾದ್ದರಿಂದ, ದಿನಾಂಕ:28-02-2021 (ಭಾನುವಾರ)ದಂದು ನಡೆಸಲಾದ ಪರೀಕ್ಷೆಗೆ ಯಾವುದೇ ದುರಾಚಾರ ಪ್ರಕರಣಗಳು ಸಂಭವಿಸದಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರುಗಳು/ ವರಿಷ್ಠಾಧಿಕಾರಿಗಳಿಗೆ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಬಗ್ಗೆ ಸೂಚನೆಗಳನ್ನು ನೀಡಿದ್ದು, ಅದರಂತೆ, ನೀಡಿರುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮತ್ತು ಪ್ರಶ್ನೆಪತ್ರಿಕೆಗಳ ಭದ್ರತೆಯ ಬಗ್ಗೆ ಮತ್ತು ಖಜಾನೆಗಳಲ್ಲಿ ಠೇವಣಿಸಿದ ಗೋಪ್ಯ ಸಾಮಗ್ರಿ/ ಪ್ರಶ್ನೆಪತ್ರಿಕೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಕೇಂದ್ರೀಕೃತ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗಿರುತ್ತದೆ. ಕೆಲವೊಂದು ತಂಡಗಳು ಪರೀಕ್ಷೆಗಳಲ್ಲಿ ದುಷ್ಕೃತ್ಯವೆಸಗುವ ಸಂಭವವಿರುವುದರಿಂದ ಗೈರುಹಾಜರಾದ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ಯಾವುದೇ ಕಾರಣದಿಂದಲು ಕೊಠಡಿಯಿಂದ ಹೊರಹೋಗದಂತೆ ಪರೀಕ್ಷೆ ಮುಕ್ತಾಯವಾಗುವವರೆವಿಗೂ ಉಳಿದ ಪ್ರಶ್ನೆಪತ್ರಿಕೆಗಳನ್ನು ಸೀಲ್ ಕೊಠಡಿಯಲ್ಲಿಯೇ ಇಡಲು ಸೂಚನೆ ನೀಡಲಾಗಿರುತ್ತದೆ. ಮಾಡಿ

ಆಯೋಗದ ಈ ಹಿಂದಿನ ಪ್ರಥಮ ದರ್ಜೆ ಸಹಾಯಕರ, ದ್ವಿತೀಯ ದರ್ಜೆ ಸಹಾಯಕರ ಹಾಗೂ ಗ್ರೂಪ್-ಸಿ ಹುದ್ದೆಗಳ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವೆಸಗುತ್ತಿದ್ದು, ವ್ಯಕ್ತಿಗಳ ಮೇಲೆ ನಿಗಾ ಇಡಲು ಮತ್ತು ಪರೀಕ್ಷಾ ಉಪಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೊಳಿಸುವುದು. ವಿಶೇಷವಾಗಿ ಅಭ್ಯರ್ಥಿಗಳ ಕಿವಿಯಲ್ಲಿ ಯಾವುದೇ Electronic Device w*w_{2} Micro Phone ಬಳಸದಿರುವ ಬಗ್ಗೆ ತಪಾಸಣೆ ಮತ್ತು ಸಂಶಯಾತ್ಮಕ ವರ್ತನೆಯ ಬಗ್ಗೆ ನಿಗಾ ಇಡಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿ, ಕಲಬುರಗಿ ಜಿಲ್ಲಾ ಕೇಂದ್ರದ ಎಲ್ಲಾ ಪರೀಕ್ಷಾ ಉಪಕೇಂದ್ರಗಳೂ ಒಳಗೊಂಡಂತೆ ಆಯ್ದ ಜಿಲ್ಲೆಗಳಲ್ಲಿ ಜಾಮರ್‌ಗಳನ್ನು ಅಳವಡಿಸಿ, ಸೂಕ್ತ ಭದ್ರತೆಯೊಂದಿಗೆ ಪರೀಕ್ಷೆಯನ್ನು ನಡೆಸಲಾಗಿರುತ್ತದೆ.

ನಗರದ

ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷಾ ದುರಾಚಾರ (exam Malpractice)ಎಸಗಲು ಪ್ರಯತ್ನಿಸಲಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿರುತ್ತದೆ. C, 0000 , ಆ ಅಭ್ಯರ್ಥಿಯನ್ನು ಆಯೋಗವು ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ಡಿಬಾರ್ ಮಾಡಲಾಗಿರುತ್ತದೆ ಮತ್ತು ಪರೀಕ್ಷಾ ಉಪಕೇಂದ್ರವನ್ನು ಕಪ್ಪು ಪಟ್ಟಿಗೆ ಸೇರಿಸಿರುತ್ತದೆ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರ, ಕೊಠಡಿ ಸಂವೀಕ್ಷಕರ ಹಾಗೂ ಜವಾನನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸಂಬಂಧಿತರನ್ನು ಕೋರಲಾಗಿದೆ,

ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ 2019-20ನೇ ಸಾಲಿನ ಸಹಾಯಕರು/ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ, ಸಂಬಂಧ, ಪತ್ರಿಕೆಗಳಲ್ಲಿನ ವರದಿಯಂತೆ ಯಾವುದೇ ಪರೀಕ್ಷಾ ದುರಾಚಾರ ವರದಿಯಾಗದೇ ಪರೀಕ್ಷೆಯನ್ನು ಸುಲಲಿತವಾಗಿ ನಡೆಸಿ, ಅದರನ್ವಯ ದಿನಾಂಕ:18-03-2022ರಂದು ಪ್ರಕಟಿಸಲಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿರುತ್ತದೆ. ಆದ್ದರಿಂದ, ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, 2019-20ನೇ ಸಾಲಿನ 1010-ಸಹಾಯಕರು/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅಪಜಲಪುರದ ತಾಲ್ಲೂಕಿನ 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆಂಬ ವರದಿಯು ನಿರಾಧಾರವಾಗಿರುತ್ತದೆ ಎಂದು ಈ ಮೂಲಕ ತಿಳಿಸಿದೆ.
logoblog

Thanks for reading Press note of FDA Exams

Previous
« Prev Post

No comments:

Post a Comment