ಅಧಿಸೂಚನೆ
ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆಪಟ್ಟಿಯನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 33 ಡಿಸಿಇ 2017, ದಿನಾಂಕ: 04.02.2017, ಇಡಿ 98 ಡಿಸಿಇ 2021, ದಿನಾಂಕ: 17.01.2021 ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿಯನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 186 ಡಿಸಿಇ 2020, ದಿನಾಂಕ: 03.02.2021 ರಲ್ಲಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಢೀಕರಣಕ್ಕೆ ಸಂಬಂಧಿಸಿದಂತ ಅಗತ್ಯ ವಿಚಾರಣೆಗಳು/ ದಾಖಲೆ ಪರಿಶೀಲನೆ ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಸರ್ಕಾರವು ವೇತನ ಶ್ರೇಣಿ ರೂ. 57700 - 182400 (ಯು.ಜಿ.ಸಿ. ವೇತನ ಶ್ರೇಣಿ)ಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.
ಸಾಮಾನ್ಯ (ಮಿಕ್ಕುಳಿದ ವೃಂದ)
👉 ಷರತ್ತುಗಳು
ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಗಳ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೊಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.
ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಸೌಧ, ಶೇಷಾದ್ರಿ ರಸ್ತೆ, ಬೆಂಗಳೂರು - 01 ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು, ಆಯುಕ್ತರು ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು.
ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.
👉 ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಳು, 2014ರ ನಿಯಮ 9ರ ಉಪ ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು, 1957ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ಸರ್ಕಾರ ಪಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜೇಷ್ಠತೆಯು ಅಂತಿಮವಾಗಿರುತ್ತದೆ.
👉 2. ದಿನಾಂಕ: 03.02.2021ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತ 1 ಜೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜೇಷ್ಠತೆಯನ್ನು ಕ್ಷೇಮ್ ಮಾಡುವ ಹಕ್ಕುಳ್ಳುವನಾಗಿರುವುದಿಲ್ಲ.
👉 3. ನೇಮಕಗೊಂಡ ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು, ಅಭ್ಯರ್ಥಿಗಳ ನೇಮಕಾತಿ ಮತ್ತು ಸ್ಥಳನಿಯುಕ್ತಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ನಿಯಮಾನುಸಾರ ಎಲ್ಲಾ ಮಾನದಂಡಗಳನ್ನು ತೃಪ್ತಿಕರವಾಗಿ ಪಾಲಿಸಿರುವ ಷರತ್ತಿಗೊಳಪಟ್ಟಿದೆ. ಹಾಗೂ ಎಲ್ಲಾ ಅರ್ಹತೆಗಳನ್ನು ಪೂರೈಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು,
👉 4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.
👉 5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ, ಕಂಪ್ಯೂಟರ್ ಲಿಟರಸ್ಸಿ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.
👉 6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ.
👉 7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೇಫೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು.
👉 8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.
👉 9. ಅಭ್ಯರ್ಥಿಯು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪುಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.
👉 10. ಮೇಲೆ ನಮೂದಿಸಿರುವ ಅಭ್ಯರ್ಥಿಗಳು ದಿನಾಂಕ: 01.04.2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
👉 11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆ/ ನಿಯೋಜನೆಗೆ ಅವಕಾಶವಿರುವುದಿಲ್ಲ.
No comments:
Post a Comment