Wednesday, 17 August 2022

Shivmogga District Anganawadi Recruitment 2022

  shekharagouda       Wednesday, 17 August 2022
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಜಿಲ್ಲೆಯ 07 ತಾಲ್ಲೂಕುಗಳಲ್ಲಿ ಖಾಲ ಇರುವ ಅಂಗನವಾಡಿ ಕಾಠ್ಯಕರ್ತೆ/ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ

ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುವ ಬಗ್ಗೆ. ಉಲ್ಲೇಖ: ಸರ್ಕಾರದ ಆದೇಶ ಸಂ:ಮಮಇ/ಐಸಿಡಿ/2017 ದಿ: 23/09/2017

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 07 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆ /ಸಹಾಯಕಿಯರಿಗೆ ಗೌರವ ಸೇವೆ ಸಲ್ಲಿಸಲು ಈ ಕೆಳಗೆ ತೋರಿಸಲಾದ ಮೀಸಲಾತಿ ಹೊಂದಿದ 18 ರಿಂದ 35 ವರ್ಷದೊಳಗಿನ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ (ಕಾರ್ಯಕರ್ತೆ ಹುದ್ದೆಗೆ ಮಾತ್ರ) 45 ವರ್ಷದೊಳಗಿನ ಸ್ಥಳೀಯ (ಅದೇ ಗ್ರಾಮ/ವಾರ್ಡ್) ಮಹಿಳಾ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯಾಗಲು ∞ * 76 ^ 6 ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯಾಗಲು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ 9ನೇ ತರಗತಿ ತೇರ್ಗಡೆಯಾಗಿರಬೇಕು. ಅರ್ಹ ಮಹಿಳಾ ಅಭ್ಯರ್ಥಿಗಳು ಈ ಕೆಳಗೆ ತೋರಿಸಲಾದ ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ: 16/08/2022 ರಿಂದ ದಿನಾಂಕ: 16/09/2022 ರ ಸಂಜೆ 5.30 ಗಂಟೆಯೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಆನ್-ಲೈನ್ ಅರ್ಜಿಯೊಂದಿಗೆ ಲಗತಿಸಬೇಕಾದ ದಾಖಲಾತಿಗಳು

1. ಅರ್ಜಿ ನಿಗದಿತ ನಮೂನೆಯಲ್ಲಿ ( theta overline upsilon ^ 6 - theta beta overline upsilon ^ 6 )

2. ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕ ಇರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಇತರೆ ಜನನ ದಾಖಲೆ (ಸಹಾಯಕಿ ಹುದ್ದೆಗೆ)

3. ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ

4. ತಹಶೀಲ್ದಾರರು /ಉಪ ತಹಶೀಲ್ದಾರರಿಂದ ಪಡೆದ ಮೂರು (3)

ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ 5. ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ

6. ಪತಿಯ ಮರಣ ಪ್ರಮಾಣ ಪತ್ರ (ವಿಧವಾ ವೇತನ ದೃಢೀಕರಣ ಹಾಗೂ ಇನ್ನಿತರೆ ಯಾವುದೇ ದಾಖಲೆಗಳನ್ನು ವಿಧವಾ ಮೀಸಲಾತಿಗೆ ದಾಖಲಾತಿ ಎಂದು ಪರಿಗಣಿಸುವುದಿಲ್ಲ.)

7. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

8. ಅಂಗವಿಕಲತೆ ಪ್ರಮಾಣ ಪತ್ರ. (ಅಂಗವಿಕಲ ವೇತನ ದೃಢೀಕರಣವನ್ನು ಪರಿಗಣಿಸುವುದಿಲ್ಲ.) 9. ವಿಚ್ಛೇದನ ಪ್ರಮಾಣ ಪತ್ರ. (ನ್ಯಾಯಾಲಯದಿಂದ ಪಡೆದಿರಬೇಕು)

10. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ,

11. ಪರಿತ್ಯಕ್ಕೆ ಎಂಬ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಪಡೆದ ಪ್ರಮಾಣ ಪತ್ರ

12. ಇಲಾಖೆಯ ಸುಧಾರಣ ಸಂಸ್ಥೆ/ರಾಜ್ಯ ಮಹಿಳಾ ನಿಲಯಗಳ ನಿವಾಸಿ ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.(ಇವರಿಗೆ ವಾಸಸ್ಥಳ ದೃಢೀಕರಣ ಕಡ್ಡಾಯವಲ್ಲ)
logoblog

Thanks for reading Shivmogga District Anganawadi Recruitment 2022

Previous
« Prev Post

No comments:

Post a Comment